Monday, August 9, 2010

ಭಾರತ ಮಾರಾಟಕ್ಕಿದೆ

(ಇದು ನಡೆದಿದ್ದು date Aug 03, 2010.)

            ಈ ದಿನ ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ 201 ಬಸ್ಸಿನಲ್ಲಿ ಮರಳುತ್ತ ಇದ್ದೆ, ಒಂದು ಕಿಟಕಿಯ ಪಕ್ಕದ ಸೀಟಿನಲ್ಲಿ ಕುಳಿತು ತೂಕಡಿಸುತ್ತ  ಇದ್ದೆ. ದೇವೇಗೌಡ ಪೆಟ್ರೋಲ್ ಬಂಕ್  ಸ್ಟಾಪ್ ನ ಸಿಗ್ನಲಲ್ಲಿ ಒಂದು ಕೂಗು ನನ್ನನ್ನು ಬಡಿದು ಎಚ್ಚರಿಸಿತು " ಭಾರತ ಮಾರಾಟಕ್ಕಿದೆ " , ಬಸ್ ಹೊರಗೆ ಹುಡುಗರು ಕೂಗುತ್ತಿದ್ದರು. " ಭಾರತ, ಭಾರತ, ಇಂಡಿಯಾ ೩೦ ರೂಪಾಯಿ". ಏನಪ್ಪಾ ಇದು 250  ವರ್ಷಾ ಬ್ರಿಟೀಷರು ದೋಚಿದ ಭಾರತ ಈಗ ಬರೀ 30 ರುಪೈಗೆ ಮಾರಾಟಕ್ಕಿದೆ!!!

         ಗಾಂದೀಜಿ ಬಹಳ ಕಷ್ಟ ಪಟ್ಟು ಒಂದು ತೊಟ್ಟು ರಕ್ತ ಹರಿಸದೆ ತಂದು ಕೊಟ್ಟ ಸ್ವತಂತ್ರ ಕೇವಲ 63 ವರ್ಷ ಗಳಲ್ಲಿ ಬರೀ  30 ರುಪೈಗೆ ಮಾರಾಟಕ್ಕಿದೆ. ( ಬರೀ ಗಾಂದೀಜಿ ಅಥವಾ ಕಾಂಗ್ರೆಸ್ ಮಾತ್ರ ಸ್ವತಂತ್ರಕ್ಕೆ ಹೋರಾಟ ಮಾಡಿದಲ್ಲ, ಲಕ್ಷಾಂತರ ಜನ ತಮ್ಮದೇ ರಣತಂತ್ರದಿಂದ ನೆತ್ತರು ಹರಿಸಿದ್ದಾರೆ ಅಥವಾ ನೆತ್ತರು ಕೊಟ್ಟಿದ್ದಾರೆ ಮತ್ತು ಸ್ವತಂತ್ರಕ್ಕಾಗಿ ಮನೆ ಮಟ ಕಳೆದು ಕೊಂಡಿದ್ದಾರೆ. ಇವರನ್ನು ಭಾರತದ ಸ್ವತಂತ್ರ ಇತಿಹಾಸ ಮರೆತು ಬಿಟ್ಟಿದೆ ಅಥವಾ ಮರೆತಂತೆ ಮಾಡಿದೆ. ಇತಿಹಾಸವನ್ನೂ ತಿರುಚುವುದು ಭಾರತದಲ್ಲಿ ಮಾತ್ರ )

      ಸ್ವಲ್ಪ ಸಮಯದ ನಂತರ ನನ್ನ ಬುದ್ದಿಗೆ ತಿಳಿದ ವಿಷಯವೆಂದರೆ, ಓಹೋ! ಇದು ಭಾರತ ಸ್ವತಂತ್ರವಾದ ತಿಂಗಳು ಅದಕ್ಕಾಗಿ ಹೊರಗೆ ಮಾರಟಕ್ಕೆ ಇರುವುದು ಭಾರತದ ಪ್ಲಾಸ್ಟಿಕ್ ಬಾವುಟ ಮತ್ತು ಅದನ್ನ ಇಡಲಿಕ್ಕೆ ಪ್ಲಾಸ್ಟಿಕ್ ಸ್ಟ್ಯಾಂಡ್ ( ಮೇಡ್ ಇನ್ ಚೀನಾ).

ಭಾರತ ಮಾರಾಟಕ್ಕಿದೆ !!!!

No comments:

Post a Comment